ಅಭಿಪ್ರಾಯ / ಸಲಹೆಗಳು

ಪ್ರಕಾರ್ಯಗಳು

ಪ್ರಾಧಿಕಾರದ ಪ್ರಕಾರ್ಯಗಳು.- ಈ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳ ಉಪಬಂಧಗಳಿಗೆ ಒಳಪಟ್ಟು, ಪ್ರಾಧಿಕಾರದ ಪ್ರಕಾರ್ಯಗಳು, ಈ ಮುಂದಿನಂತೆ ಇರುತ್ತವೆ;

(1) ಕೆರೆಯ ಒತ್ತುವರಿಯನ್ನು ಪ್ರತಿಬಂಧಿಸುವುದು ಮತ್ತು ತೆರವುಗೊಳಿಸುವುದು ಒಳಗೊಂಡಂತೆ ತನ್ನ ಅಧಿಕಾರ ವ್ಯಾಪ್ತಿಯೊಳಗೆ ಬರುವ ಎಲ್ಲಾ ಕೆರೆಗಳ ಮೇಲೆ ನಿಯಾಮಕ ನಿಯಂತ್ರಣವನ್ನು ಹೊಂದಿರುವುದು;
(2) ಕ್ಷೀಣಿಸುತ್ತಿರುವ ಅಂತರ್ಜಲವನ್ನು ಮರುಭರ್ತಿಗೊಳಿಸಲು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು, ಸ್ಥಳೀಯ ಮತ್ತು ಇತರ ಪ್ರಾಧಿಕಾರಿಗಳ ನೆರವಿನೊಂದಿಗೆ ಸಮಗ್ರ ಸಂಪರ್ಕವನ್ನು ಸಾಧಿಸಿಕೊಳ್ಳುವ ಮೂಲಕ ಕೆರೆಗಳನ್ನು, ಕೊಳಗಳನ್ನು, ಸರೋವರಗಳನ್ನು ರಕ್ಷಿಸುವುದು, ಸಂರಕ್ಷಿಸುವುದು, ಜೀರ್ಣೋದ್ಧಾರಗೊಳಿಸುವುದು, ಪುನರ್ ರೂಪಿಸುವುದು ಮತ್ತು ಪೂರ್ವಸ್ಥಿತಿಗೆ ತರುವುದು;
(3) ಯಾವುದೇ ಅಥವಾ ಎಲ್ಲಾ ಕೆರೆಗಳಿಗೆ ಸಂಬಂಧಿಸಿದಂತೆ ಪರಿಸರಾತ್ಮಕ ಪ್ರಭಾವಗಳ ನಿರ್ಧರಣಾ ಅಧ್ಯಯನವನ್ನು ಕೈಗೊಳ್ಳುವುದು;
(4) ಭೌಗೋಳಿಕ ಮಾಹಿತಿ ವ್ಯವಸ್ಥೆಯ ಸಹಾಯದೊಂದಿಗೆ ಕೆರೆಗಳು ಮತ್ತು ಅವುಗಳ ಸುತ್ತಮುತ್ತಲ ಪ್ರದೇಶಗಳ ಪರಿಸರಾತ್ಮಕ ಯೋಜನೆ ಮತ್ತು ನಕ್ಷೆಯ ರಚನೆಯನ್ನು ಕೈಗೆತ್ತಿಕೊಳ್ಳುವುದು ಮತ್ತು ಕೆರೆಗಳು ಹಾಗೂ ಅವುಗಳ ಜಲಾನಯನಗಳ ಅಂಕಿಅಂಶಗಳನ್ನು (ಡೇಟಾಬೇಸ್) ಮತ್ತು ಅಟ್ಲಾಸನ್ನು ಸಿದ್ಧಪಡಿಸುವುದು;
(5) ಕೆರೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸುವುದು ಹಾಗೂ ಕೆರೆಗಳ ವೆಚ್ಚ ಮತ್ತು ಅಭಿವೃದ್ಧಿಯನ್ನು ಮೇಲ್ವಿಚಾರಿಸುವುದು.
(6) ಸಮಪ್ರಮಾಣದ ಆರ್ಥಿಕ ಬೆಳವಣಿಗೆ ಮತ್ತು ಕೃಷಿಯಲ್ಲಿನ ಸಾಮಥ್ರ್ಯಕ್ಕಾಗಿ ಭೂಮಿ ಮತ್ತು ಜಲನಿರ್ವಹಣೆಯ ಸಂಯೋಜಿತ ಪ್ರಯತ್ನದ ಮುಖಾಂತರ ಕೆರೆಯ ಹೂಳನ್ನು ತೆಗೆಯುವುದು ಹಾಗೂ ಜಲಸಂಪನ್ಮೂಲ ಸಾಮಥ್ರ್ಯವನ್ನು ಮತ್ತು ಕೃಷಿ ಉತ್ಪಾದಕತೆಯನ್ನು ಪ್ರೋತ್ಸಾಹಿಸುವುದು;
(7) ರೈತರ ಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳಲು ಮತ್ತು ಅವರ ನೈಸರ್ಗಿಕ ಸಂಪನ್ಮೂಲಗಳ ಆಧಾರದಲ್ಲಿ ಆದಾಯ, ಉದ್ಯೋಗ ಮತ್ತು ಆರ್ಥಿಕ ಸಾಮಥ್ರ್ಯವನ್ನು ಗರಿಷ್ಟಗೊಳಿಸಲು ವಿವಿಧÀ ಕೃಷಿ ಉದ್ದಿಮೆಗಳನ್ನು ಸಂಯೋಜಿಸುವುದು, ಪ್ರೋತ್ಸಾಹಿಸುವುದು;
(8) ಹೆಚ್ಚುವರಿ ಆದಾಯದ ಉತ್ಪತ್ತಿಗಾಗಿ ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು;
(9) ಚರಂಡಿಯ ಕಶ್ಮಲಗಳನ್ನು ಕಡಿಮೆ ಮಾಡುವ ಮತ್ತು ಚರಂಡಿಯ ರೊಚ್ಚನ್ನು ಕೆರೆಗಳಿಗೆ ಹರಿಯಬಿಡದಿರುವುದರ ಮೂಲಕ ಜಲ ಜೀವವೈವಿದ್ಯ, ಜಲಪಕ್ಷಿಗಳು ಮತ್ತು ಜಲೀಯ ಸಸ್ಯಗಳನ್ನು ಸುಧಾರಿಸುವುದು ಮತ್ತು ಅವುಗಳಿಗೆ ಬೇಕಾದ ಪರಿಸರವನ್ನು (ಜೌಗು ಭೂಮಿ) ಸೃಜಿಸುವುದು;
(10) ಮಳೆ (ಸ್ಟಾರ್ಮ್) ನೀರು ಚರಂಡಿ ವ್ಯವಸ್ಥೆಯ ಮೂಲಕ ನೀರು ಸಂಗ್ರಹಣೆಗಾಗಿ ಸೌಲಭ್ಯ ಕಲ್ಪಿಸುವುದು, ಸೂಕ್ತವಾದ ಮಣ್ಣಿನ ಮತ್ತು ನೀರಿನ ಸಂರಕ್ಷಣಾ ಕ್ರಮಕೈಗೊಳ್ಳುವ ಮೂಲಕ ಕೆರೆಗಳ ಹೂಳನ್ನು ಕಡಿಮೆ ಮಾಡುವುದು.

(11) ಅವಶ್ಯಕತೆಗನುಸಾರವಾಗಿ ನೀರಿನ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಆ ಬಗ್ಗೆ ನಿಗಾವಹಿಸುವುದು, ಕೆರೆಯ ಜೀವಿ ಪರಿಸ್ಥಿತಿಯನ್ನು ಸಂರಕ್ಷಿಸುವುದು ಹಾಗೂ ಗೃಹ ಬಳಕೆಯ ಮತ್ತು ಕೈಗಾರಿಕಾ ಮಾಲಿನ್ಯಗಳಿಂದ ಅವುಗಳನ್ನು ಸಂರಕ್ಷಿಸುವುದು;
(12) ಕುಡಿಯುವುದಕ್ಕಾಗಿ, ನೀರಾವರಿಗಾಗಿ, ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಅಥವಾ ಪ್ರಾಧಿಕಾರವು ನಿರ್ಧರಿಸಬಹುದಾದಂಥ ಯಾವುದೇ ಇತರ ಉದ್ದೇಶಗಳಿಗಾಗಿ ಕೆರೆಗಳನ್ನು ಬಳಸಿಕೊಳ್ಳುವುದು ಅಥವಾ ಬಳಸಿಕೊಳ್ಳಲು ಅನುಮತಿಸುವುದು;
(13) ಸಮುದಾಯಗಳ ಮತ್ತು ಸ್ವಯಂ ಸೇವಾ ಏಜೆನ್ಸಿಗಳು ಕೆರೆಯ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಕೆರೆಯನ್ನು ಸಂರಕ್ಷಿಸುವುದು, ಕಾಪಾಡುವುದು ಮತ್ತು ರಕ್ಷಿಸುವುದು ಇವುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು;
(14) ಸರ್ಕಾರ ಅಥವಾ ಯಾವುದೇ ಸಂಸ್ಥೆಯು ಇದಕ್ಕೆ ಕಳುಹಿಸಬಹುದಾದಂಥ ಯಾವುದೇ ವಿಷಯದ ಮೇಲೆ ಸಲಹೆಯನ್ನು ನೀಡುವುದು;
(15) ಕೆರೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಸಕ್ತ ವಿಷಯಗಳ ಮೇಲೆ ಸಮಗ್ರ ಮತ್ತು ಸಮನ್ವಯಗೊಳಿಸಿದ ಪ್ರಾಯೋಗಿಕ ಸಂಶೋಧನೆಗೆ ಪ್ರೋತ್ಸಾಹಿಸುವುದು;
(16) ಈ ಅಧಿನಿಯಮದ ಉದ್ದೇಶಗಳನ್ನು ಸಾಧಿಸಲು, ಪ್ರಾಧಿಕಾರವು, ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ, ಅವಶ್ಯಕ, ಅನುಕೂಲಕರ ಅಥವಾ ಆನುಷಂಗಿಕವೆಂದು ಪರಿಗಣಿಸಬಹುದಾದ ಅಂಥ ಇತರ ಕಾರ್ಯಗಳನ್ನು ಮಾಡುವುದು;
(17) ರಾಜ್ಯದಲ್ಲಿನ ಎಲ್ಲಾ ಕೆರೆಗಳ ಸಬಲ ಅಂಕಿಅಂಶ (ಸ್ಟ್ರಾಂಗ್ ಡಾಟಾಬೇಸ್)ವನ್ನು ಸೃಜಿಸುವುದು ಮತ್ತು ಕೆರೆಗಳಿಗಾಗಿ ನಡೆಯುವ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳನ್ನು ನಿಯತಕಾಲದಲ್ಲಿ ದಾಖಲಿಸುವುದು.

ಇತ್ತೀಚಿನ ನವೀಕರಣ​ : 19-09-2023 12:43 PM ಅನುಮೋದಕರು: Approver ktcda


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080