ಅಭಿಪ್ರಾಯ / ಸಲಹೆಗಳು

ಕೆರೆ ಸಂಜೀವಿನಿ ಯೋಜನೆ

ಕೆರೆಗಳಲ್ಲಿ ಹೂಳು ಸಂಗ್ರಹಣೆ ಸ್ವಾಭಾವಿಕ ಪ್ರಕಿಯೆಯಾಗಿದ್ದು ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಕಡಿಮೆ ನೀರಿನ ಸಂಗ್ರಹಣೆಯಿಂದಾಗಿ ಅಚ್ಚುಕಟ್ಟು ಪ್ರದೇಶದ ಅರ್ಧ ಭಾಗಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಕೆರೆಗಳ ಹೂಳೆತ್ತುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಒದಗಿಸುವ ಅನುದಾನದಲ್ಲಿ ಪೂರ್ಣ ಮಟ್ಟದಲ್ಲಿ ಕೆರೆಗಳ ಹೂಳು ತೆಗೆಯಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಕ್ತ ಯೋಜನೆಯ ಮೂಲಕ ಕ್ರಮವಹಿಸಬೇಕೆಂಬ ಧ್ಯೇಯದೊಂದಿಗೆ “ಕೆರೆ ಸಂಜೀವಿನಿ” ಯೋಜನೆಯನ್ನು ಕೈಗೊಳ್ಳಲು 2017-18ನೇ ಸಾಲಿನ ಆಯವ್ಯಯದಲ್ಲಿ ಹೊಸ ಯೋಜನೆಯಾಗಿ ಘೋಷಿಸಲಾಗಿದೆ.


ಕೆರೆಗಳು ಹಳ್ಳಿಯ ಆರ್ಥಿಕ ಮತ್ತು ಸಾಮಾಜಿಕ ಕೇಂದ್ರ ಬಿಂದುವಾಗಿ ಹಳ್ಳಿಯ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೆರೆಗಳ ಮೇಲ್ಬಾಗದಲ್ಲಿ ಅರಣ್ಯನಾಶ, ಕೃಷಿ ಭೂಮಿ ಮತ್ತು ಕೆರೆಯ ಜಲಾವೃತ್ತ ಪ್ರದೇಶದಲ್ಲಿ ರೈತರು ಉಳುಮೆ ಮಾಡುವ ಕಾರಣಗಳಿಂದ ಮಣ್ಣಿನ ಸವಕಳಿಯಿಂದಾಗಿ ಕೆರೆಗಳಲ್ಲಿ ಹೂಳು ಸಂಗ್ರಹಣೆಯಾಗುತ್ತದೆ. ಈ ಹೂಳನ್ನು ತೆಗೆದು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಿ ಅಚ್ಚುಕಟ್ಟನ್ನು ಸ್ಥೀರಿಕರಿಸುವ ಜೊತೆಗೆ ಇದು ಪರೋಕ್ಷವಾಗಿ ಅಂತರ್ಜಲ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.


“ಕೆರೆ ಸಂಜೀವಿನಿ” ಯೋಜನೆಯಡಿ ರೈತರು ಕೆರೆ ಹೂಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸಾಗಾಣಿ ಮಾಡಲು ಇಚ್ಚಿಸುವಂತಹ ಕೆರೆಗಳನ್ನು ಆಯ್ದಕೊಂಡು ಕೆರೆ ಹೂಳನ್ನು ತೆಗೆಯಲು ವೆಚ್ಚವನ್ನು ಇಲಾಖಾವತಿಯಿಂದ ಭರಿಸಲಾಗುವುದು. ಇದಕ್ಕೆ ಜೆಸಿಬಿ ರೀತಿಯ ಯಂತ್ರಗಳನ್ನು ಪ್ರತಿ ಘಂಟೆಗೆ ಬಾಡಿಗೆ ಆಧಾರದ ಮೇಲೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು. ಹೂಳು ಸಾಗಾಣಿಕೆ ವೆಚ್ಚವನ್ನು ನೀಡುವುದಿಲ್ಲ. ಹೂಳೆತ್ತುವ ಕಾಮಗಾರಿಗೆ ಬಳಸುವ ಜೆ.ಸಿ.ಬಿ ರೀತಿಯ ಯಂತ್ರಗಳ ಹಾಗೂ ರೈತರು ಹೂಳು ಮಣ್ಣನ್ನು ಸಾಗಾಣಿಕೆ ಮಾಡುವ ವಾಹನಗಳ ದಿನಚರಿಯನ್ನು ನಿರ್ವಹಿಸಿ ಇದನ್ನು ತೆಗೆದ ಹೂಳಿನ ಪ್ರಮಾಣದ ಅಳತೆಯೊಂದಿಗೆ ತಾಳೆ ಮಾಡಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಕೆರೆ ಆಯ್ಕೆ ಸಂದರ್ಭದಲ್ಲಿ ಹೂಳೆತ್ತಲು ಯೋಜಿತ ಕೆರೆಗಳಲ್ಲಿ 10 ವರ್ಷಗಳಲ್ಲಿ ಒಮ್ಮೆಯಾದರೂ ತುಂಬಿರುವ ಕೆರೆಗಳಿಗೆ ಆದ್ಯತೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಕೆರೆ ಬಳಕೆದಾರರ ಸಂಘಗಳ ಮುಖಾಂತರ ಅಥಾವ ಟೆಂಡರ್ ಮುಖಾಂತರ ನಿರ್ವಹಿಸಲು ಅವಕಾಶ ನೀಡಲಾಗಿದೆ. ಕೆರೆ ಸಂರಕ್ಷಣಾ ಅಭಿವೃದ್ದಿ ಪ್ರಾಧಿಕಾರ ಹಾಗೂ ಸಣ್ಣ ನೀರಾವರಿ ಇಲಾಖೆ ಮುಖಾಂತರ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆರೆ ಬಳಕೆದಾರರ ಸಂಘದ ಮುಖಾಂತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

 

 

ಇತ್ತೀಚಿನ ನವೀಕರಣ​ : 22-10-2021 02:25 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080